Home | Contact Us | Site Map
ಉದ್ದೇಶ :
  1. 15+ ವಯೋಮಾನದ ಎಲ್ಲಾ ಅನಕ್ಷರಸ್ಥರೂ ಮೂಲ ಸಾಕ್ಷರತೆ ಪಡೆಯುವ ಅವಕಾಶ ಕಲ್ಪಿಸುವುದು.
  2. ಮೂಲ ಸಾಕ್ಷರತೆ ಪಡೆದವರು ಅದನ್ನು ಸ್ಥಿರೀಕರಿಕೊಳ್ಳಲು, ಉನ್ನತೀಕರಿಸಲು ಹಾಗೂ ಬಳಸಿಕೊಳ್ಳಲು ಸಹಾಯಕ ಚಟುವಟಿಕೆಗಳನ್ನು ಕೈಕೊಳ್ಳುವುದು.
  3. ನವಸಾಕ್ಷರರಿಗೆ ಮತ್ತು ಸಾಕ್ಷರರಿಗೆ ನಿರಂತರ ಶಿಕ್ಷಣ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು.
  4. ಜೀವನ ಪರ್ಯಂತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಕಲಿಕಾ ವಾತಾವರಣ (ಐಜಚಿಡಿಟಿಟಿರ ಂಣಟಠಠಿಜಡಿಜ) ಸೃಷ್ಟಿಸುವುದು.
 
ಆದ್ಯತಾ ವಲಯ :
  • ನಗರ ಮತ್ತು ಗ್ರಾಮೀಣ ಪ್ರದೇಶದ ಸಾಕ್ಷರತಾ ಪ್ರಮಾಣದ ಅಂತರವನ್ನು ಅಳಿಸಲು ಗ್ರಾಮೀಣ ಪ್ರದೇಶದ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವುದು.
  • ಪ್ರತಿಯೊಬ್ಬ ಅನಕ್ಷರಸ್ಥ ಮಹಿಳೆಯನ್ನು ಕಲಿಕೆಗೆ ಒಳಪಡಿಸಿ ಪುರುಷ ಮತ್ತು ಮಹಿಳಾ ಸಾಕ್ಷರತಾ ಪ್ರಮಾಣದ ಅಂತರವನ್ನು ಇಳಿಸುವುದು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗದ ಅನಕ್ಷರಸ್ಥರ ಕಲಿಕೆಗೆ ಒತ್ತು ನೀಡುವುದು.
  • ಸಾಕ್ಷರತೆಯ ಮೂಲಕ ತಳಸ್ತರದ ಪ್ರಜಾತಂತ್ರ ಸಂಸ್ಥೆಗಳನ್ನು ಬಲಗೊಳಿಸುವುದು
  • ಸಾಕ್ಷರತೆಯೊಂದಿಗೆ ವೃತ್ತಿ ಕೌಶಲ ಒದಗಿಸುವುದರ ಮೂಲಕ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಹೆಚ್ಚಳ.

 

 
Copyright © 2010, Department of Mass Education Co-operation Education Information Centre & Gumbi