Home | Contact Us | Site Map
ಸಾಕ್ಷರ ಭಾರತ್ 2012 ಗೆ ಸುಸ್ವಾಗತ

ಸಾಕ್ಷರ ಭಾರತ್ ಇದೊಂದು ಮಹತ್ವಾಕಾಂಕ್ಷಿ ಕಾರ್ಯಕ್ರಮ. ಇದು ಸಮಗ್ರ ಮತ್ತು ವ್ಯಾಪಕ ಕಾರ್ಯಕ್ರಮವಾಗಿದೆ. ಮಹಿಳಾ ಸಾಕ್ಷರತಾ ಪ್ರಮಾಣ ಶೇ. 50 ಕ್ಕಿಂತ ಕಡಿಮೆ ಇರುವ 26 ರಾಜ್ಯಗಳ 365 ಜಿಲ್ಲೆಗಳಲ್ಲಿ ಬರುವ 1,70,000 ಗ್ರಾಮಗಳಲ್ಲಿ ಅನುಷ್ಠಾನಗೊಳ್ಳಬೇಕಿದೆ. 15 + ವರ್ಷ ವಯೋಮಾನದ 70 ದಶಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸಬೇಕಿದೆ.

ಸಾಕ್ಷರ ಭಾರತ್ ಕಾರ್ಯಕ್ರಮದ ರಾಜ್ಯಗಳಲ್ಲಿ ಕನರ್ಾಟಕವು ಒಂದಾಗಿದೆ. ಸಾಕ್ಷರತಾ ಕಾರ್ಯಕ್ರಮವು ಮೂಲ ಸಾಕ್ಷರತೆ, ಸಮಾನ ಶಿಕ್ಷಣ, ವೃತ್ತಿ ಕೌಶಲ ತರಬೇತಿ ಮತ್ತು ಮುಂದುವರಿಕೆ ಶಿಕ್ಷಣ ಕಾರ್ಯಕ್ರಮವನ್ನೊಳಗೊಂಡ ಸಮಗ್ರ ಸಾಕ್ಷರತಾ ಕಾರ್ಯಕ್ರಮವಾಗಿದೆ.

2012ರ ಸಮಯಕ್ಕೆ ಸಾಕ್ಷರತಾ ಪ್ರಮಾಣ ಶೇ 80ಕ್ಕೆ ಏರಿಸುವುದು. 2017ರ ಸಮಯಕ್ಕೆ 100ಕ್ಕೆ ನೂರರಷ್ಟು ಸಾಕ್ಷರ ಪ್ರಮಾಣ ತಲುಪುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 15+ ವಯೋಮಿತಿಯ 51.80 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವುದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜನರ ಸಾಕಷರತೆಗೆ ಆದ್ಯತೆ ನೀಡಿ, ಅವರ ಜೀವನ ಮಟ್ಟ ಸುಧಾರಣೆಗಾಗಿ ವೃತ್ತಿ ಕೌಶಲ ತರಬೇತಿ, ಜೀವನ ಪರ್ಯಂತ ಕಲಿಕೆಗೆ ಮುಂದುವರಿಕೆ ಶಿಕ್ಷಣಕ್ಕೆ ಅವಕಾಶವಿದೆ.

ಶೇಕಡಾ 50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತೆ ಪ್ರಮಾಣ ಇರುವ 20 ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 117 ತಾಲ್ಲೂಕು, 3788 ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರದ ಸಹಯೋಗದಲ್ಲಿ ಶೇಕಡಾ 75:25 ಅನುಪಾತದಲ್ಲಿ ಅನುದಾನ ಭರಿಸುವುದಾಗಿದೆ.

ಈ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಥರ್ಿಕ ಇಲಾಖೆ, ಸಕರ್ಾರೇತರ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸ್ವಸಹಾಯ ಸಂಘ, ಸ್ತ್ರೀ ಶಕ್ತಿ ಸಂಗ ಯುವಜನ ಮಂಡಲಿಗಳು., ಈ ಎಲ್ಲ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕಾಗಿದೆ.

 
Copyright © 2010, Department of Mass Education Co-operation Education Information Centre & Gumbi