Feedback | Contact Us | Site Map
ಲಾಂಛನ:
  • ಮುಖ:
  • ನಕ್ಷೆ:
  • ಬಣ್ಣಗಳು:
  • ಜ್ಯೋತಿ:
  • ಮಹಿಳೆಯ ಜ್ಞಾನಾಭಿಮುಖ
  • ಕರ್ನಾಟಕ ರಾಜ್ಯದ ನಕ್ಷೆ
  • ಹಳದಿ ಮತ್ತು ಕೆಂಪು ಕನ್ನಡ ಬಾವುಟದ ಬಣ್ಣಗಳು
  • ಜ್ಞಾನದ ಸಂಕೇತ, ಲಾಂಛನದೊಳಗಿರುವ ಜಾಗೃತಿ ಪದವು, ಅರಿವಿನೊಂದಿಗೆ ಸಾಕ್ಷರತೆ ಜಾಗೃತಿಗೆ ಮೂಲ ಎಂಬುದನ್ನು ಸೂಚಿಸುತ್ತದೆ.
 
ಉದ್ದೇಶಗಳು:
  • ಕರ್ನಾಟಕದ ಎಲ್ಲ ಅನಕ್ಷರಸ್ಥರಿಗೆ, ಮೂಲ ಸಾಕ್ಷರತೆ, ಶಿಕ್ಷಣದ ಅವಕಾಶ ಕಲ್ಪಿಸುವುದು.
  • ರಾಷ್ಟ್ರೀಯ ಸಾಕ್ಷರತಾ ಮಿಷನ್ನಿನ ಚಟುವಟಿಕೆಗಳನ್ನು ಮತ್ತು ಸಾಕ್ಷರತಾ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದು.
  • ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಾಕ್ಷರತಾ ಸಮಿತಿಗಳ ಅಸ್ತಿತ್ವ ಮತ್ತು ಸಮರ್ಥ ಕಾರ್ಯನಿರ್ವಹಣೆಗೆ ಅಗತ್ಯವಾದ ಕಾರ್ಯನಿರ್ವಹಣೆ ಗುಂಪನ್ನು ರೂಪಿಸಲು ಸಹಕರಿಸುವುದು. ಜಿಲ್ಲಾ, ತಾಲ್ಲೂಕ ಮತ್ತು ಗ್ರಾಮ ಮಟ್ಟದಲ್ಲಿ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಾದ ಅಧಿಕಾರವನ್ನು ವಿಕೇಂದ್ರಿಕರಿಸುವುದು.
  • ರಾಜ್ಯದ ಸಾಕ್ಷರತೆ ಸುಧಾರಣೆಗೆ ಶೈಕ್ಷಣಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೇತರ ಸಂಘಗಳು ಮತ್ತು ಸೇವಾ ಮನೋಭಾವವುಳ್ಳ ವ್ಯಕ್ತಿಗಳು ಪಾಲ್ಗೊಳ್ಳುವಂತೆ ಮಾಡುವುದು.
  • ಜೀವನ ಗುಣಮಟ್ಟ ಸುಧಾರಣಾ ಕಾರ್ಯಕ್ರಮಗಳನ್ನು ರೂಪಿಸುವುದು.
  • ವಯಸ್ಕರ ಶಿಕ್ಷಣ ಮತ್ತು ಅದರ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ಅಧ್ಯಯನಗಳು, ಪ್ರಯೋಗಗಳು, ಅನ್ವೇಷಣಾ ಚಟುವಟಿಕೆಗಳು ಮತ್ತು ಸಂಶೋಧನೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು.
  • ಶೈಕ್ಷಣಿಕ ಸಾಮಗ್ರಿಗಳನ್ನು ರಚಿಸುವುದು, ಪ್ರಕಟಿಸುವುದು ಮತ್ತು ಸಾಕ್ಷರತಾ ಕಾರ್ಯಕ್ಷೇತ್ರಕ್ಕೆ ವಿತರಿಸುವುದು.
  • ಹಿಂದುಳಿದ ತಾಲ್ಲೂಕು/ಗ್ರಾಮ ಪಂಚಾಯಿತಿಗಳ ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು, ಮಹಿಳೆಯರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ, ಅಲ್ಪಸಂಖ್ಯಾತರ ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು. ಗ್ರಾಮೀಣ ಪ್ರದೇಶಗಳ ಸಾಕ್ಷರತೆ ಹೆಚ್ಚಿಸುವುದು, ಒಟ್ಟಾರೆ ರಾಜ್ಯಾದ ಸಾಕ್ಷರತಾ ಪ್ರಮಾಣ ಹೆಚ್ಚಿಸುವುದು.
  • ರಾಷ್ಟ್ರೀಯ ಮುಕ್ತಶಾಲೆಯ ಸಹಯೋಗದಲ್ಲಿ ರಾಜ್ಯ ಮುಕ್ತಶಾಲೆಗಳನ್ನು ಸ್ಥಾಪಿಸುವುದು.
 
2018-19ರ ವರೆಗೆ ಕೈಗೊಂಡ ಕಾರ್ಯಕ್ರಮಗಳು:
  • ಸಂಪೂರ್ಣ ಸಾಕ್ಷರತಾ ಆಂದೋಲನ
  • ಸಾಕ್ಷರೋತ್ತರ ಕಾರ್ಯಕ್ರಮ
  • ಮುಂದುವರಿಕೆ ಶಿಕ್ಷಣ ಕಾರ್ಯಕ್ರಮ
  • ವಯಸ್ಕರ ಶಿಕ್ಷಣ ಪಡೆ
  • ಕಲಿಕೆ-ಗಳಿಕೆ ಸಾಕ್ಷರತಾ ಕಾರ್ಯಕ್ರಮ
  • ಸಾಕ್ಷರ ಸನ್ಮಾನ
  • ಪುನ:ಶ್ಚೇತನ ಸಾಕ್ಷರತಾ ಕಾರ್ಯಕ್ರಮ
  • ಕಿರು ಸಾಕ್ಷರತಾ ಯೋಜನೆ
  • ವಿದ್ಯಾಥರ್ಿಗಳ ಮೂಲಕ ಸಾಕ್ಷರತೆ
  • ಶಿಬಿರ ಸಾಕ್ಷರತೆ
  • ಕ್ರಿಯಾತ್ಮಕ ಜಲಸಾಕ್ಷರತೆ
  • ಕಾರಾಗೃಹ ಸಾಕ್ಷರತೆ
  • ಬಾಕಿ ಉಳಿದ ಅನಕ್ಷರಸ್ಥರ ಸಾಕ್ಷರತಾ ಕಾರ್ಯಕ್ರಮ
  • ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲ್ಲೂಕುಗಳಲ್ಲಿ ಸಾಕ್ಷರತಾ ಕಾರ್ಯಕ್ರಮ
  • ಹೈದರಾಬಾದ್-ಕರ್ನಾಟಕ ಪ್ರದೆಶದ 06 ಜಿಲ್ಲೆಗಳಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮ