Feedback | Contact Us | Site Map
ಇ-ಆಡಳಿತ
ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ
ಲೋಕ ಶಿಕ್ಷಣ ನಿರ್ದೇಶನಾಲಯದಲ್ಲಿ ಇ - ಆಡಳಿತ ವಿಭಾಗ ಕರ್ತವ್ಯ ನಿರ್ವಹಿಸುತ್ತಿದ್ದು ಎಲ್ಲಾ ಜಿಲ್ಲೆಗಳಿಂದ ವಿವಿಧ ಕಾರ್ಯಕ್ರಮದ ಮಾಹಿತಿಯನ್ನು ಇಂಟರ್ ನೆಟ್ ಮುಖಾಂತರ ತರಿಸಿ ವಿಷಯಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ವೆಬ್ ಸೈಟ್ ಅಭಿವ್ರದ್ಧಿಗೊಲಿಸಲಾಗಿದೆ. ಎಲ್ಲಾ ಜಿಲ್ಲೆಗಳಿಗೆ ಬ್ರಾಂಡ್ ಬ್ಯಾಂಡ್  ಇಂಟರ್ ನೆಟ್ ಸೇವೆ ವ್ಯವಸ್ಥೆಯಿದೆ. ಎಲ್ಲಾ ಜಿಲ್ಲಾ ಸಾಕ್ಷರತಾ ಸಮಿತಿಗಳಿಗೆ ಹಾಗೂ ನಿರ್ದೇಶನಾಲಯಕ್ಕೆ ಇ - ಮೇಲ್ ವಿಳಾಸಗಳನ್ನು ಸಿದ್ಧಪಡಿಸಿ ವರದಿಗಳನ್ನು ಇ - ಮೇಲ್ ಮತ್ತು ಫ್ಯಾಕ್ಸ್ ಮೂಲಕ ನೀಡುವುದು ಮತ್ತು ತರಿಸಿಕೊಳ್ಳುವುದು ಆಗುತ್ತುದೆ.
ಕಂಪ್ಯೂಟರ್ ಮೂಲಕ ಸಾಕ್ಷರತೆಯ ಪ್ರಯೋಗ :
ವಯಸ್ಕರ ಸಾಕ್ಷರತೆಗಾಗಿ ರಾಜ್ಯ ಸಂಪನ್ಮೂಲ ಕೇಂದ್ರ ಸಿದ್ಧಪಡಿಸಿದ ' ಬಾತವ್ವ ಕಲಿಯಾಕ ' ಪಠ್ಯಪುಸ್ತಕವನ್ನು ಆಧರಿಸಿ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆ. ಇದರಲ್ಲಿ ಮೂಲಕ ಅನಕ್ಷರಸ್ಥರು ಸಾಕ್ಷರತಾ ಕೌಶಲ ಪಡೆಯಬಹುದಾಗಿದೆ.  ಕಂಪ್ಯೂಟರ್ ಮೂಲಕ ಮೌಸ್ ಬಳಿಸಿ, ಅಕ್ಷರ ಪದಗಳನ್ನು ಉಚ್ಚಾರಣೆ ಮೂಲಕ ಕಲಿಯಬಹುದು. ಕನ್ನಡ ಅಕ್ಷರಗಳು, ಸ್ವರ ಚಿಹ್ನೆ , ಒತ್ತಕ್ಷರಗಳನ್ನು ಸೇರಿಸಿ ಬರೆಯುವ ಕ್ರಮವನ್ನು ಸರಳವಾಗಿ ಇದರಲ್ಲಿ ಪರಿಚಯಿಸಲಾಗಿದೆ. ಮೌಸ್ ಬಲಸಿ ಅಕ್ಷರ ಅಭ್ಯಾಸ ಮಾಡಬಹುದು. ಕಲಿಕಾರ್ಥಿಗಳು ಮೌಸ್ ನಿಂದ ಅಕ್ಷರ ಕಲ್ಪಿಸಲಾಗಿದೆ. ಹಾಗೆಯೇ ಅಕ್ಷರ ಬರೆಯುವ ಕ್ರಮವನ್ನು ಪರಿಚಯಿಸಲಾಗಿದೆ.